Health Tips

ಪರಂಗಿ ಹಣ್ಣು ತಿನ್ನಿರಿ, ದೇಹದಲ್ಲಿನ ರೋಗಾಣು ದೂರ ಮಾಡಿ- ಪರಂಗಿಯಿಂದ ಏನೆಲ್ಲಾ ಉಪಯೋಗವಿದೆ ಎಂಬ ಮಾಹಿತಿ ಇಲ್ಲಿದೆ

0

ಪರಂಗಿ ಹಣ್ಣನ್ನು ಹೇರಳವಾಗಿ ಬೆಳೆಯುತ್ತಾರೆ. ಮನುಷ್ಯನ ದೇಹದಲ್ಲಿರುವ ರೋಗಾಣುಗಳನ್ನು ಪರಂಗಿ ಹಣ್ಣು ನಾಶ ಮಾಡುವ ಔಷಧಿ ಗುಣದ ಶಕ್ತಿ ಹೊಂದಿದೆ. ಹೆಚ್ಚಿನ ಪ್ರಮಾಣದಲ್ಲಿ ಪರಂಗಿ ತಿಂದರೆ ಸ್ವಾಸ್ಥ್ಯ ಆರೋಗಕ್ಕೆ ಅನುಕೂಲವಾಗುತ್ತದೆ.
ಜಠರದಲ್ಲಿರುವ ದುಂಡು ಹುಳುಗಳ ನಾಶಕ್ಕೆ ಪರಂಗಿಯನ್ನು ಸಕ್ಕರೆಯೊಂದಿಗೆ ಮಿಶ್ರಣ ಮಾಡಿ ತಿನ್ನಬೇಕು. ಇದು ಜೀರ್ಣಕರವಾಗಿದ್ದು, ರೇಚಕ ಗುಣ ಕೂಡ ಹೊಂದಿದೆ.
ಪರಂಗಿ ಹಣ್ಣು ಸೇವನೆಯಿಂದ ದೇಹಕ್ಕೆ ತಂಪಾಗುತ್ತದೆ. ಜೇನಿನೊಡನೆ ಪರಂಗಿ ಹಣ್ಣು ಮಿಶ್ರಣ ಮಾಡಿ ತಿಂದರೆ ಬಹಳಷ್ಟು ಪೌಷ್ಠಿಕಾಂಶ ದೊರೆಯುತ್ತದೆ. ಮಕ್ಕಳಿಗೆ ಹಾಗೂ ಗರ್ಭವತಿಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಂಗಿ ಹಣ್ಣು ಶಕ್ತಿ ನೀಡುತ್ತದೆ. ಆದರೆ ಗರ್ಭವತಿಯರು ಬಸರಿಯಾದ 3-4 ತಿಂಗಳ ತನಕ ಮಾತ್ರ ಪರಂಗಿ ಹಣ್ಣು ಅಥವಾ ಕಾಯಿ ಸೇವನೆ ಮಾಡಬಾರದು.
ಹೃದಯ ಮತ್ತು ನರಗಳ ದೌರ್ಬಲ್ಯದಿಂದ ನರಳುವರಿಗೆ ಪರಂಗಿ ಹೊಸ ಚೈತನ್ಯ ನೀಡುತ್ತದೆ. ಕಣ್ಣಿನ ತೊಂದರೆಗೆ ಪರಂಗಿ ಹಣ್ಣು ಹೇಳಿ ಮಾಡಿಸಿದ ಔಷಧಿ ಗುಣವುಳ್ಳ ಹಣ್ಣಾಗಿದೆ.
ಇದಷ್ಟೆ ಅಲ್ಲದೆ ಮಲಬದ್ಧತೆಗೆ ಪರಂಗಿ ರಾಮಬಾಣ. ಪರಂಗಿ ಹಣ್ಣನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ ಜೀರಿಗೆ, ಮೆಣಸು, ಉಪ್ಪು, ನಿರಂಬೆರಸಗಳಿಂದ ಚಟ್ನಿ ತಯಾರಿಸಿ ಸೇವಿಸಬೇಕು. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಇದರಿಂದ ಬಾಣಂತಿಗೆ ತಾಯಿ ಹಾಲು ವೃದ್ಧಿಯಾಗುತ್ತದೆ.
ಪರಂಗಿ ಗಿಡದ ಎಲೆಯ ರಸ ಸೇವಿಸುವುದರಿಂದ ಜಠರದಲ್ಲಿ ಕ್ರಿಮಿ ನಾಶವಾಗುತ್ತದೆ. ಪರಂಗಿ ಸಿಪ್ಪೆಯನ್ನು ಕಸಕ್ಕೆ ಎಸೆಯದೆ ಅದನ್ನು ಚರ್ಮದ ಮೇಲೆ ಉಜ್ಜಿದರೆ ಕಲೆಗಳು ನಿವಾರಣೆಯಾಗುತ್ತದೆ. ಪರಂಗಿ ಹಣ್ಣಿನ ರಸ ಮತ್ತು ಸಿಪ್ಪೆಯನ್ನು ಗಾಯಕ್ಕೆ ಹಚ್ಚುವುದರಿಂದ ಗಾಯ ವಾಸಿಯಾಗುತ್ತದೆ.

siteadmin

ಚಿನ್ನದ ಬೆಲೆ ಅಲ್ಪ ಏರಿಕೆ- ಬೆಳ್ಳಿ ಬೆಲೆ ಸ್ವಲ್ಪ ಇಳಿಕೆ- ಇವತ್ತಿನ ಚಿನ್ನ, ಬೆಳ್ಳಿ, ಡಾಲರ್ ರೇಟ್ ಡಿಟೈಲ್ಸ್ ಇಲ್ಲಿದೆ

Previous article

ಮಹಿಳೆಯರ ಜೊತೆ ಯಡಿಯೂರಪ್ಪ ವರ್ತನೆ ಸರಿ ಇಲ್ಲ- ಇದು BSY ವಯಸ್ಸು ಮತ್ತು ವ್ಯಕ್ತಿತ್ವಕ್ಕೆ ಅವಮಾನ- ಯತ್ನಾಳ್ ಕಿಡಿ ಕಿಡಿ

Next article

You may also like

Comments

Leave a reply

Your email address will not be published. Required fields are marked *

More in Health Tips