Top News

ಮಂತ್ರಾಲಯವನ್ನು ಬಿಡದ ಭೂ ವಿವಾದ- ಬಿಚ್ಚಾಲಿ ಜಪದ ಕಟ್ಟೆ ಮಾಲೀಕತ್ವದ ಬಗ್ಗೆ ಮೆಗಾ ಫೈಟ್- ಸರ್ಕಾರದ ಜಾಣ ನಡೆ

0

ಮಂತ್ರಾಲಯ- ಹೆಣ್ಣು, ಮಣ್ಣು ಮತ್ತು ಹೊನ್ನಿಗಾಗಿ ಮಹಾಯುದ್ದಗಳೇ ಜರುಗಿವೆ. ಇದು ಸರ್ವಸಂಗ ಪರಿತ್ಯಾಗಿಗಳನ್ನ ಬಿಟ್ಟಿಲ್ಲ. ಕಲಿಯುಗದ ಕಾಮಧೇನು ರಾಘವೇಂದ್ರ ಸ್ವಾಮಿ ಮಠ ಮತ್ತು ಬಿಚ್ಚಾಲಿ ಜಪದ ಕಟ್ಟೆ ವಾರಸುದಾರರ ನಡುವೆ ಜಾಗದ ಕದನ ನಡೆಯುತ್ತಿದೆ. ಈ ನಡುವೆ ರಾಜ್ಯ ಸರ್ಕಾರ ಈ ವಿವಾದ ಬೆಂಕಿಗೆ ತುಪ್ಪ ಸುರಿದು ರಂಗ ಪ್ರವೇಶ ಮಾಡಿದೆ.

ರಾಯಚೂರು ತಾಲೂಕಿನ ಬಿಚ್ಚಾಲಿ ಗ್ರಾಮದ ತುಂಗಭದ್ರಾ ನದಿಯ ತಟದಲ್ಲಿ 650 ವರ್ಷಗಳ ಹಿಂದೆ ರಾಘವೇಂದ್ರ ಸ್ವಾಮಿಗಳು ತಪ್ಪಸು ಮಾಡಿದ್ದರಂತೆ. ಅಪ್ಪಣಾಚಾರ್ಯ‌ ಎಂಬುವವರು ರಾಯರು ತಪಸ್ಸು ಮಾಡಿದ ಸ್ಥಳದಲ್ಲಿ ಏಕಶಿಲಾ ಬೃಂದಾವನ ನಿರ್ಮಿಸಿದ್ದರು. ಧಾರ್ಮಿಕ ಕಾರ್ಯಗಳನ್ನ ಮಾಡುತ್ತಾ ಸ್ಥಳಕ್ಕೆ ಪೂಜ್ಯ ಭಾವನೆ ತಂದಿದ್ದರು. ಬಿಚ್ಚಾಲಿ ರಾಯರ ಜಪದ ಕಟ್ಟೆ ಎಂದು ಖ್ಯಾತಿ ಪಡೆದು ಮಂತ್ರಾಲಯಕ್ಕೆ ಬರುವ ಭಕ್ತರು ಕೂಡ ಇಲ್ಲಿಗೆ ಆಗಮಿಸಿ ದರ್ಶನ‌ ಪಡೆಯುತ್ತಿದ್ದಾರೆ.

ಈಗ ಅಪ್ಪಣಾಚಾರ್ಯರ ಕಾಲದಿಂದಲೂ ಅವರ ವಂಶದ ಏಳನೆ ತಲೆಮಾರಿನವರು ಧಾರ್ಮಿಕ ಕಾರ್ಯಗಳನ್ನ ನೆರವೇರಿಸುತ್ತಾ ಬಂದಿದ್ದಾರೆ. ರಾಯರ ಜಪದ ಕಟ್ಟೆಯ ಏಕಶಿಲಾ ಬೃಂದಾವನದ ದರ್ಶನ ನಿತ್ಯ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ಜಪದ ಕಟ್ಟೆಯ ಜಾಗಕ್ಕೆ ಹೊಂದಿಕೊಂಡಿರುವ 35, 36 ಮತ್ತು 37 ಸರ್ವೆ ನಂಬರ್ ಜಮೀನುಗಳಿವೆ. 35 ಮತ್ತು 36 ಸರ್ವೆ ನಂಬರ್ ಸರ್ಕಾರಿ ಜಮೀನಾಗಿದ್ದು, ತಲಾ ಒಂದು ಎಕರೆಯಂತೆ ಎರಡು ಎಕರೆ ಜಮೀನಿದೆ. 36 ರಲ್ಲಿ ಆರು‌ಗುಂಟೆ ಜಮೀನು ಜಪದ ಕಟ್ಟೆಗೆ ಸೇರಿದೆ. ಸರ್ವೆ ನಂಬರ್ 37 ಖಾಸಗಿ ಜಮೀನಾಗಿದೆ.

ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪ್ರಸ್ತುತ ಪೀಠಾಧಿಪತಿ ಸುಬುಧೇಂದ್ರ ಸ್ವಾಮಿಗಳು ಬಿಚ್ಚಾಲಿಯ ರಾಯರ ಜಪದ ಕಟ್ಟೆಯನ್ನ ತಮ್ಮ ಸ್ವಾಧೀನಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ. ಇದರ ಭಾಗವಾಗಿ ಸರ್ವೆ ನಂಬರ್ 37 ರಲ್ಲಿ 6 ಗುಂಟೆ ಜಮೀನನ್ನ ಖರೀದಿಸಿದ್ದಾರೆ. ಜೊತೆಗೆ ಮಂತ್ರಾಲಯದಿಂದ ಜನರನ್ನ ಕರೆತಂದು ಬಿಚ್ಚಾಲಿ ರಾಯರ ಜಪದ ಕಟ್ಟೆ ಸ್ವಾಧೀನಕ್ಕೆ ಮುಂದಾಗಿದ್ದರು.

ಬಿಚ್ಚಾಲಿ ಗ್ರಾಮಸ್ಥರು ಅಪ್ಪಣಾಚಾರ್ಯರ ಕುಟುಂಬಸ್ಥರ ಬೆಂಬಲಕ್ಕೆ ನಿಂತ ಕಾರಣ ಮಂತ್ರಾಲಯದಿಂದ ಬಂದ ಜನರು‌ ಮರಳಿ ಹೋಗಿದ್ದಾರೆ. 35 ಮತ್ತು 36 ಸರ್ವೆ ನಂಬರನ ಎರಡು ಎಕರೆ ಸರ್ಕಾರಿ ಜಮೀನನ್ನ ಸುಬುಧೇಂದ್ರ ಸ್ವಾಮಿಗಳು ತಮ್ಮ‌ ಪ್ರಭಾವ ಬಳಸಿ, ಕರ್ನಾಟಕ ಸರ್ಕಾರದ ಸಚಿವ ಸಂಪುಟದಲ್ಲಿ ಮಂಜೂರು ಮಾಡಿಸಿಕೊಂಡಿದ್ದಾರೆ.

35, 36 ಮತ್ತು 37 ಸರ್ವೆ ನಂಬರ್ ಜಮೀನಗಳ ಬಗ್ಗೆ ಹೈಕೊರ್ಟನಲ್ಲಿ ದಾವೆ ಹೂಡಲಾಗಿದೆ. ಜಮೀನು ವಿವಾದ ಹೈ ಕೋರ್ಟ್ ನಲ್ಲಿರುವಾಗಲೇ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಮಂತ್ರಾಲಯ ರಾಘವೇಂದ್ರ ಸ್ವಾಮಿಯ ಮಠಕ್ಕೆ ಮಂಜೂರು ಮಾಡಿರುವುದು ವಿವಾದ‌ ಮತ್ತಷ್ಟು ಬುಗಿಲೇಳಲು ಕಾರಣವಾಗಿದೆ.
ಸರ್ಕಾರದ ನಿರ್ಧಾರದ ವಿರುದ್ದ ನ್ತಾಯಾಲದಯ ಮೊರೆ ಹೋಗುವುದಾಗಿ ಕೃಷ್ಣಾಚಾರ್ಯ ಬಾಡದ ಮತ್ತು ಪವನಕುಮಾರ ಆಚಾರ್ಯ ತಿಳಿಸಿದ್ದಾರೆ.

siteadmin

ಶಿವಮೊಗ್ಗ ಧಗ ಧಗ- ಬೈಕ್, ಕಾರುಗಳಿಗೆ ಬೆಂಕಿ- ಕಲ್ಲು ತೂರಾಟ- ಕೋಮುಗಲಭೆಗೆ ಜನರು ತತ್ತರ- ಪರಿಸ್ಥಿತಿ ಉದ್ವಿಗ್ನ

Previous article

ಶಿವಮೊಗ್ಗದಲ್ಲಿ ಬಾರೀ ಹಿಂಸಾಚಾರ- ಮುಸಲ್ಮಾನ್ ಗುಂಡಾಗಳ ಕೈವಾಡ- ಇವರಿಗೆ ಡಿ.ಕೆ.ಶಿವಕುಮಾರ್ ಕುಮ್ಮಕ್ಕು

Next article

You may also like

Comments

Comments are closed.

More in Top News