Top News

ಹಳ್ಳ ಹಿಡಿದ ಕೊಡವ ಹೆರಿಟೇಜ್ ಸೆಂಟರ್ ಯೋಜನೆ- ಅಸ್ಥಿ ಪಂಜರದಂತಾಗಿರುವ ನಿರ್ಮಾಣದ ಹಂತದ ಕಟ್ಟಡ

0

ಮಡಿಕೇರಿ- ಕೊಡಗಿನ ಸಾಂಸ್ಕ್ರತಿಕ ಹಾಗೂ ಸಾಂಪ್ರದಾಯಿಕ ಪರಂಪರೆಯನ್ನು ಒಂದೇ ಸೂರಿನಲ್ಲಿ ಅನಾವರಣಗೊಳಿಸುವ ಯೋಜನೆ ಹಳ್ಳ ಹಿಡಿದಿದೆ. ಸರ್ಕಾರದ ಮಹತ್ವಾಕಂಕ್ಷಿಯ ಈ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ.

 

ಇದು ಕೊಡವ ಸಮುದಾಯದ ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಡಿಕೇರಿಯಲ್ಲಿ ಆರಂಭಿಸಿದ್ದ ಮಹತ್ವಾಕಾಂಕ್ಷೆಯ ಕೊಡವ ಹೆರಿಟೇಜ್ ಸೆಂಟರ್ ಕಟ್ಟಡ…ದೇಶದಲ್ಲಿಯೇ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಕೊಡವರ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ​ ಕನಸಿನ ಗೋಪುರವೊಂದನ್ನು ನಿರ್ಮಾಣ ಮಾಡಲಿಕ್ಕೆ ಸರ್ಕಾರ ಮುಂದಾಗಿತ್ತು. ಆದ್ರೆ, 10ಕ್ಕೂ ಹೆಚ್ಚು ವರ್ಷ ಕಳೆದರೂ ಕೊಡವ ಹೆರಿಟೇಜ್ ನ ನಿರ್ಮಾಣ ಕಾರ್ಯ ಮುಗಿಯದೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ…ಇಷ್ಟಕ್ಕೂ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಈ ರೀತಿ ಪಾಳು ಬೀಳಲು ಕಾರಣ ಏನು ಅಂತಾ ನೋಡೋದಾದ್ರೆ ನಮಗೆ ಕೇಳಿಬರೋದು ಕಾಮಗಾರಿಯ ಅವ್ಯವಹಾರ.. ಕೊಡವ ಹೆರಿಟೇಜ್ ನಿರ್ಮಾಣದಲ್ಲಿ ಭಾರಿ ಅಕ್ರಮ ಆಗಿದೆಯಂತೆ… ಇದನ್ನ ಖುದ್ದು ಮಡಿಕೇರಿ ಶಾಸಕರು ಕೆಲವು ಕಡೆ ಆರೋಪಮಾಡಿದ್ದಾರೆ..

ಈ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಗೋಲ್ಮಾಲ್ ಆಗಿದೆ. 1.75 ಕೋಟಿ ವೆಚ್ಚದಲ್ಲಿ ಪೂರ್ಣವಾಗಬೇಕಿದ್ದ ಈ ಕಾಮಗಾರಿಗೆ ಇದಾಗಲೇ 2.68 ಕೋಟಿಯಷ್ಟು ದುಂದುವೆಚ್ಚ ಮಾಡಲಾಗಿದೆ…ಆದ್ರೆ, ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿದರೂ ಇಲ್ಲಿ ಕಣ್ಣಿಗೆ ಕಾಣುವ ಯಾವುದೇ ಕೆಲಸ ಆಗಿಲ್ಲ. ಕೊಡಗಿನ ಸಂಸ್ಕೃತಿಯನ್ನು, ಕೊಡಗಿನ ಪ್ರಾಚೀನ ಪರಂಪರೆ ಬಿಂಬಿಸುವ ನಿಟ್ಟಿನಲ್ಲಿ ರೂಪಿಸಲಾದ ಯೋಜನೆ ನುಂಗಣ್ಣರ ಪಾಲಾಗಿದೆ. ಇಂಜಿನಿಯರ್ ಹಾಗೂ ಗುತ್ತಿಗೆದಾರರು ಜಿಲ್ಲಾಡಳಿತವನ್ನ ದಿಕ್ಕು ತಪ್ಪಿಸಿದ್ದಾರೆ. ಇನ್ನಾದ್ರೂ ಈ ಯೋಜನೆ ಮುಗಿದು ಸಾರ್ವಜನಿಕರ ಉಪಯೋಗಕ್ಕೆ ಬರಬೇಕಿದೆ…

siteadmin

ಮಧುಮಗ ಗಡ್ಡ ಬಿಡುವಂತಿಲ್ಲ, ಶಾಂಪೇನ್ ಬಳಸುವಂತಿಲ್ಲ- ಪಟಾಕಿ ಸಿಡಿಸುವಂತಿಲ್ಲ- ಕೊಡವ ಸಮಾಜದ ಮಹತ್ವದ ನಿರ್ಣಯ

Previous article

ಕಾಂಗ್ರೆಸ್ ಸೇರಲು ಜಿಟಿಡಿಗೆ ಮನಸ್ಸಿದೆ- ಆದರೆ ಹೆಚ್.ಡಿ.ದೇವೇಗೌಡರು, ಹೆಚ್ ಡಿಕೆ ಬಿಡುತ್ತಿಲ್ಲ- ಸಿದ್ದರಾಮಯ್ಯ

Next article

You may also like

Comments

Comments are closed.

More in Top News